ಅನ್ವೇಷಣೆ
ದಿನಾ ಬೆಳಿಗ್ಗೆ ಬಾಲ್ಕನಿಗೆ ಮುಖಕ್ಕೊಟ್ಟು
ಈ ಕಾಗೆಯ ಕೂಗು
ಬಾಯಾರಿದೆ ಎಂದು ತಟ್ಟೆ ಇಟ್ಟರೆ
ಕೊಕ್ಕು ಕುಕ್ಕಿಸಿ ಗುಟುಕು ಹೀರಿತು
ನಿಂತಿತಲ್ಲ ಅಂದರೆ ಮತ್ತೆ ಅದೇ ಕಾಕಾ !
ಬಿಸ್ಕತ್ ಹುಡಿ ಮಾಡಿ ತಿನ್ನು ಅಂದರೆ
ಹೆಕ್ಕಿ ತುಂಡು ಹಾರಿಸಿತ್ತು !.
ಮತ್ತೆ ಮರುದಿನ !
ಒಳಗೆ ನೋಡಿ ಕಿಟಕಿಯಲಿ ರಾಗ
ಏನೊ ಇರಬೇಕೆಂದು ಹುಡುಕಾಡಿದೆ
ಪಕ್ಕದ ಅಶೋಕ ಮರದಲಿ ಗೂಡು
ಇಣುಕುತಿತ್ತು ಸಣ್ಣ ಕೊಕ್ಕು ...
ಕಾಗೆಗೆ ಭಯ !
-ಅಕುವ
No comments:
Post a Comment