ಕುರುಕ್ಷೇತ್ರ
ನನ್ನ ಮನೆಯ ದೇವಿ ಸದಾ
ದೀಪಕಳಾಗಿ ಬೆಳಗುತಿರುವಳು
ಉಪನದಿಯ ಇಕ್ಕೆಲದಲಿ
ಮೊರ್ತಳಾಗಿ ಹರಸುತಿಹಳು
ಊರಿಗೆ ಗ್ರಾಮದೇವತೆ ಇವಳೇ !
ನಿತ್ಯಪೂಜೆಯ ಸಂಭ್ರಮ
ತೆಂಗುಮರಗಳ ತಂಪು ಗಾಳಿಗೆ
ಮೈಯ್ಯೊಡ್ಡುವಳು....
ಹಸುರಬಯಲ ಲೀಲಾಜಾಲದಲಿ
ತೂಗುವಳು....
ಘಂಟೆ ಘೋಷಗಳ ಭಕ್ತಿಭಾವದ ಹೂವಿನ
ಪೂಜೆಗೆ ಪ್ರಸನ್ನಳು !
ಮಕ್ಕಳ್ಳೀಯುತ್ತಿದ್ದ ಶಾರದ ಸೇವೆಗೆ
ಬೆರಗಾಗುತಿದ್ದಳು.....!
ಮೊನ್ನೆ ಮೊನ್ನೆ ಬಯಲ ನಡುವೆ ಸೀಳಿ ಹೋದ
ಕೊಂಕಣರೈಲು...
ಗದ್ದೆ ಪಡೆದವರು ಕಾಂಚಣ ಬಿಚ್ಚಲು
ಮಕ್ಕಳ ಮನವು ಕದಡಿ ರಾಡಿಯಾಗಿದೆ !
ಮರೆತೆ ಬಿಟ್ಟರಲ್ಲ ನಿಮ್ಮಿರುವಿಕೆಯನ್ನ!
ದಾಯಾದಿ ಕಲಹದಲಿ ಮೈಮರೆಯಲು
ತುಂಡು ಭೂಮಿಯ ನೆಪ ಮಾಡಿ...
ಸಮರಕ್ಕೆ ಸಜ್ಜಾಗಿಹರು....
ನಿನ್ನೊಡಲೆ ಮತ್ತೆ ಕುರುಕ್ಷೇತ್ರ !
-ಅಕುವ
No comments:
Post a Comment