Friday, September 30, 2011

ಕೋಟೆ

ಕೋಟೆ

ಕಲ್ಲಿನಿಂದ ಕಡಿದಿಲ್ಲ
ಸಿಮೆಂಟು ಹಚ್ಚಿಲ್ಲ
ಗಾರೆ ಹೊಡೆದಿಲ್ಲ
ಆದರೂ ಕಟ್ಟಿಕೊಂಡಿದ್ದೇವೆ
ನಮಗೆ ನಾವೇ ಕೋಟೆ.....!

ಇಲ್ಲಿ ಅಳತೆ ಕೋಲಿಲ್ಲ
ದಂಡಸೂತ್ರವಿಲ್ಲ
ಕಟ್ಟಿದ ಕೋಟೆ ಯಾರಿಗೂ
ಕಾಣಲೇ ಇಲ್ಲ....!

ಅದರೂ ಕಟ್ಟಿ ಕೊಂಡಿದ್ದೇವೆ
ನಮ್ಮಳೊಗೆ ಸಂಪ್ರದಾಯದ
ಕೋಟೆ..!
ಧರ್ಮದ ನೆವನಕ್ಕೆ ಸ್ವಾತಂತ್ರ್ಯ
ಹತ್ತಿಕ್ಕುವ ಕೋಟೆ...!
ನಿನ್ನ ನನ್ನ ಬೇರ್ಪಡಿಸುವ
ಸೂತಕದ ಕೋಟೆ.........!

-ಅಕುವ

1 comment:

  1. ನನ್ನ ಬ್ಲಾಗಿಗೆ ಬಂದು ಕವನ ಓದಿದ್ದಕ್ಕಾಗಿ ಧನ್ಯವಾದಗಳು ಗೆಳೆಯ.

    ಕೋಟೆ
    ಅಗೋಚರ ಸ್ವನಿರ್ಮಿತ ಕೋಟೆಯನ್ನು ಚೆನ್ನಾಗಿ ಕೃತಿಯಾಗಿಸಿದ್ದೀರಿ. ಅಲ್ಪ ಬದುಕಿನಲ್ಲೂ ನಮ್ಮ ಈ ಅಹಮಿಗೆ ಎಲ್ಲೀದೆಯೋ ಪರಿಹಾರ!

    ನನ್ನ 2ನೇ ಬ್ಲಾಗು:
    www.badari-notes.blogspot.com

    ReplyDelete