Saturday, December 25, 2010
ರಾಧೆ -ರಾಧೇಯ
ರಾಧೆ -ರಾಧೇಯ
ರಾಧೆ ನೀನು ವಂಚಿತಳಾದೆ ಪ್ರೇಮಿಯಿಂದ
ರಾಧೇಯ ನೀನು ವಂಚಿತನೇ ನಿನ್ನ ಸಂಬಂಧಿಗಳಿಂದ !
ಕೃಷ್ಣ ನಿನ್ನ ಬಿಟ್ಟು ಬಂದ ಗೋಕುಲದಿ ರಾಧೆ
ಕುಂತಿ ನಿನ್ನ ಬಿಟ್ಟಳು ತೇಲಿ ಗಂಗೆಯೊಳ್ ರಾಧೇಯ !
ಮರಳಿಬರುವ ಭಾಷೆಯ ರಾಧೆ ನೀ ಪಡೆದೆ ಕೃಷ್ಣನಲಿ
ನೀನಿನ್ನು ತಬ್ಬಲಿ ರಾಧೇಯ ನಗುತಿದ್ದೆ ತೊಟ್ಟಿಲಲಿ
ಮರೆಯದಾದೆ ಕೃಷ್ಣನ, ಕಾದು ಕಾದು ಮದುವೆಯಾದೆ
ರಾಧೇಯನ ಕೈಯಲಿ ನೀ ಬೆಳೆದು ಅಂಗದಧಿಪತಿಯಾದೆ
ಕೃಷ್ಣ ಮತ್ತೆ ಬಂದ ಗೋಕುಲಕೆ ನಿನ್ನ ಭೇಟಿಗಲ್ಲ !
ಕುಂತಿ ಮತ್ತೆ ಸಿಕ್ಕಳು ಪಾಂಡವರ ತಾಯಾಗಿ ಕರ್ಣ !
ರಾಧೆ ನೀ ಕಳೆದೆ ಜೀವನವೆಲ್ಲಾ ವೇಣುಲೋಲನ ನೆನಪಲಿ
ದಾನಿಯಾಗಿಬಿಟ್ಟೆ ಮೋಸಹೋಗಿಬಿಟ್ಟೆ ಕರ್ಣ ನಿನ್ನವರಿಂದ !
ಮರೆಯಾದೆ ರಾಧೆ...ಯಾರೂ ನಿನ್ನ ಅರಿಯಲಿಲ್ಲ
ಕೊನೆಯಾದೆ ಪೌರುಷದಿ ರಾಧೇಯ ನೀ ಉಳಿಯಲಿಲ್ಲ !
--ಅಕುವ
25/12/2010
Subscribe to:
Posts (Atom)